ಉಡುಪಿ : ದುಷ್ಕರ್ಮಿಗಳು ಸರಣಿ ದರೋಡೆ ಯತ್ನಿಸಿ, ಸಿಕ್ಕ ಸಿಕ್ಕ ವಾಹನ ಸುಟ್ಟು ಹಾಕಿದ ಘಟನೆ ಜಿಲ್ಲೆಯ ಸಮೀಪ ಬೈಲೂರು ಹಾಗೂ ಮಾರ್ಪಳ್ಳಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಉಡುಪಿ ಬೈಲೂರು ವಾರ್ಡ್ ನ ದುರ್ಗಾ ನಗರದಲ್ಲಿ ದುಷ್ಕರ್ಮಿಗಳು ಬೈಕ್ , ರಿಕ್ಷಾ ಸುಟ್ಟು ದರೋಡೆ ಯತ್ನ ನಡೆಸಿದ್ದಾರೆ. ಒಂದು ಮನೆಯ ಗಾಜನ್ನು ಒಡೆದಿದ್ದು, ಮತ್ತೊಂದು ಮನೆಯಲ್ಲಿ ಇನ್ವರ್ಟರ್ ವೈಯರ್ ಕಟ್ ಮಾಡಿ ದರೋಡೆ ಯತ್ನ ನಡೆಸಿದ್ದಾರೆ. ಇದೇ ವೇಳೆ ಆಟೋದಲ್ಲಿದ್ದ 2 ಸಾವಿರ ನಗದು, ದೈವಸ್ಥಾನದ ಕಾಣಿಕೆ ಹುಂಡಿ ಕಳವು ಯತ್ನ ನಡೆಸಿ ಮನೆಯೊಳಗೆ ನುಗ್ಗಿ ಚಿನ್ನ ಕಳವು ಮಾಡಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










