ಸರ್ಕಾರ ಮನೆ ನಿರ್ಮಾಣ ಮಾಡಿಕೊಡಲಿಲ್ಲ ಎಂದರೆ ಸರ್ಕಾರವನ್ನೇ ಕೆಡವುತ್ತೇವೆ : ಬಾಲಚಂದ್ರ ಜಾರಕಿಹೊಳಿ.

258
firstsuddi

ಬೆಳಗಾವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಕ್ಷೇತ್ರದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದು, ಈ ವೇಳೆ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಿಲ್ಲ ಎಂದರೆ ಸರ್ಕಾರವನ್ನೇ ಕೆಡವುತ್ತೇವೆ ಎಂದು ಹೇಳಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರವಾಹದಿಂದ ನಾಶವಾಗಿರುವ ಅರಭಾವಿ ಮತಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರೊಂದಿಗೆ ಮಾತನಾಡಿದ್ದು, ನಿಮಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ವೇಳೆ ಸರ್ಕಾರ ಮನೆ ನಿರ್ಮಾಣ ಮಾಡಿಕೊಡಲಿಲ್ಲ ಎಂದರೆ ಸರ್ಕಾರವನ್ನೇ ಕೆಡವುತ್ತೇವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.