ಸಹೋದರಿಯರ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ವರ್ಗಾವಣೆ – ಶಾರೀಕ್‍ಗೆ ವಿದೇಶದಿಂದ ಹಣ ಸಂದಾಯವಾಗ್ತಿತ್ತಾ?

64
firstsuddi

ಬೆಂಗಳೂರು/ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರ ಶಾರೀಕ್ ನಿಂದ ಸಹೋದರಿಯರ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹೋಗಿರುವುದು ಬಯಲಾಗಿದೆ. ಇಷ್ಟೊಂದು ಹಣ ಶಾರೀಕ್ ಗೆ ಬರುತ್ತಿದ್ದಿದ್ದು ಎಲ್ಲಿಂದ..?, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ವಿದೇಶದಿಂದ ಫಂಡಿಂಗ್ ಆಗುತ್ತಿತ್ತಾ? ಎಂಬ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತೋರ್ವ ಉಗ್ರ ಅರಫಾತ್ ದುಬೈನಲ್ಲಿದ್ದು, ಈತನೇ ಶಾರೀಕ್ ಗೆ ಹಣ ಸಂದಾಯ ಮಾಡುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಪೊಲೀಸರು ಈ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಇತ್ತ ಮಂಗಳೂರಿನ ಆತ್ಮಾಹುತಿ ಬಾಂಬ್ ಹಿಂದಿನ ರಹಸ್ಯ ಬಯಲಾಗಿದ್ದು, ಶಾರೀಕ್ ತನ್ನ ಸ್ನೇಹಿತ ಮಾಝ್ ಬಂಧನಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಜಬೀವುಲ್ಲಾನ ಬಂಧನ ಬಳಿಕ ಯಾಸೀನ್, ಮಾಝ್ ನನ್ನು ಬಂಧಿಸಲಾಗಿತ್ತು. ಈ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ರು. ಅಲ್ಲದೇ ಈ ಮೂವರು ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪಣ ತೊಟ್ಟಿದ್ದರಂತೆ.