ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ನಟಿ ರಚಿತಾರಾಮ್…

424
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುಳ್ಳು ವದಂತಿಗಳಿಗೆ ಖುದ್ದು ರಚಿತಾ ರಾಮ್ ಅವರೇ ಸ್ಪಷ್ಟನೇ ನೀಡಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ರಚಿತಾರಾಮ್ ಈ ನಡುವೆ ಸಾಮಾಜಿಕ ಜಾಲತಾಗಳಲ್ಲಿ (facebook, instagram,YouTube,twitter etc)ಹರಿದಾಡುತ್ತಿರೋ ವದಂತಿಗಳ ಬಗ್ಗೆ ಒಂದು ಸ್ಪಷ್ಟತೆ ಕೊಡಲು ಬಯಸುತ್ತೇನೆ, ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ, ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಠಿ ಮಾಡಿದರೆ ಖುಷಿಯುಂಟಾಗಬಹುದು; ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ

ಅತಿ ಮುಖ್ಯವಾದ ಸಂಗತಿ ಏನೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ, ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ ಸುಳ್ಳು ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.