ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ…

225
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಒಂದು ದಿನದ ಗ್ರಾಮ ವಾಸ್ತವ್ಯಕ್ಕೆ 1.22 ಕೋಟಿ ರೂಅನ್ನು ದುಂದುವೆಚ್ಚ ಮಾಡಿದ್ದಾರೆ. ಒಂದು ದಿನಕ್ಕೆ ದುಬಾರಿ ದುಂದುವೆಚ್ಚುವನ್ನು ಮಾಡಿದ್ದಾರೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಬಿ.ಎಸ್. ಯಡಿಯೂರಪ್ಪ ಅವರು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.
• ತಾಜ್ ಹೋಟೆಲ್ ನಲ್ಲಿ ವಾಸ್ತವ್ಯದಲ್ಲಿದ್ದಾಗ ರೈತರ ಆತ್ಮಹತ್ಯೆಗೆ ನಿಮ್ಮ ಬಳಿ ಉತ್ತರ ಇದೆಯಾ?
• ತಾಜ್ ವೆಸ್ಟೆಂಡ್‍ನಲ್ಲಿ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಪರಿಹಾರ ಆಯ್ತಾ?
• ಮನ್ಸೂರ್ ಜೊತೆ ಬಿರಿಯಾನಿ ತಿಂದಿದ್ರಿ, ಆದರೆ ಸಿಬಿಐ ತನಿಖೆ ಬಗ್ಗೆ ಮೌನವೇಕೆ?
• ಸಮ್ಮಿಶ್ರ ಸರ್ಕಾರದ ಕಿತ್ತಾಟದಿಂದ ಜನರಿಗೆ ಮುಕ್ತಿ ಯಾವಾಗ?
• ಬರ ಇರುವಾಗ ಗ್ರಾಮ ವಾಸ್ತವ್ಯದ ನಾಟಕ ಸರಿಯೇ?
• ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಗಳಿಗೆ ಹಣ ಎಲ್ಲಿದೆ?
• ಸಾಲಮನ್ನಾ ಭರವಸೆ ಕೊಟ್ಟು ಮನ್ನಾ ಮಾಡದೇ ಕಣ್ಣೀರು ಹಾಕಿದರೆ, ಜನರು ನಿಮ್ಮನ್ನು ನಂಬಬೇಕ?
• ಜಿಂದಾಲ್ ಪ್ರಕರಣದಲ್ಲಿ ನೀವು ಪಡೆದ ಕಿಕ್ ಬ್ಯಾಕ್ ಎಷ್ಟು?
• ಹಿಂದಿನ ಗ್ರಾಮ ವಾಸ್ತವ್ಯದ ಬಗ್ಗೆ ಶ್ವೇತಪತ್ರ ಹೊರಡಿಸುತ್ತೀರ?
• ಗ್ರಾಮವಾಸ್ತವ್ಯದಿಂದಲೇ ಗ್ರಾಮದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿರ್ಧಾರ ನಿಮಗೆ ಎಷ್ಟರ ಮಟ್ಟಿಗೆ ಸರಿ? ಎಂದು ಬಿ.ಎಸ್ ಯಡಿಯೂರಪ್ಪ ಅವರು ಪ್ರಶ್ನಿಸಿದ್ದಾರೆ.