ಸಿದ್ದರಾಮಯ್ಯ ಅವರನ್ನು ಎದೆಯಿಂದ ಎತ್ತಿ ಸೈಡಿಗಿಟ್ಟಿದ್ದೇನೆ : ಎಂ.ಟಿ.ಬಿ. ನಾಗರಾಜ್.

203
firstsuddi

ಬೆಂಗಳೂರು : ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳುತ್ತಿದ್ದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು, ಈಗಾ ಸಿದ್ದರಾಮಯ್ಯ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಅನರ್ಹ ಶಾಸಕರೆಲ್ಲರೂ ಇಂದು ಸಭೆ ನಡೆಸಿದ್ದು, ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕೋರ್ಟ್ ವಿಚಾರಣೆ ಬಗ್ಗೆ ಚರ್ಚಿಸಿದ್ದೇವೆ. ಕ್ಷೇತ್ರಗಳ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಅವರು ತಮ್ಮ ಸೋಲಿಗೆ ರಮೇಶ್ ಕುಮಾರ್ ಕಾರಣ ಎಂದು ಹೈಕಮಾಂಡ್‍ಗೆ ವರದಿ ನೀಡಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಮೊದಲು ಎದೆ ಬಗೆದರೆ ಸಿದ್ದರಾಮಯ್ಯ ಇರುತ್ತಾರೆ ಎಂದು ಹೇಳಿದ್ದು ನಿಜ ಆದರೆ ಈಗಾ ಆ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗಾ ಕ್ಷೇತ್ರದ ಮತದಾರರು ನನ್ನ ಎದೆಯಲ್ಲಿ ಇದ್ದಾರೆ ಎಂದರು.