ಸಿದ್ದರಾಮಯ್ಯ ಅವರಿಗೆ ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಮನಸ್ಸಿನಲ್ಲಿ ನೋವಿರಬಹುದು ?- ಹೆಚ್.ಡಿ. ದೇವೇಗೌಡ…

185
firstsuddi

ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅವರ ಮನಸ್ಸಿನಲ್ಲಿ ಇರಬಹುದು. ಅದರಿಂದ ಅವರಿಗೆ ನೋವಾಗಿರಬಹುದು. ನಂತರ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ 5 ವರ್ಷ ಕೆಲಸ ಮಾಡಿದರು. ಹೋದ ಚುನಾವಣೆಯಲ್ಲಿ ಮೈಸೂರಿನಲ್ಲಿ ಸೋಲು ಅನುಭವಿಸಿದ್ದು, ಚುನಾವಣೆಯಲ್ಲಿ ಸೋತಿದ್ದಕ್ಕೆ ಅವರ ಮನಸ್ಸಿಗೆ ನೋವಾಗಿರಬಹುದು. ಅದಕ್ಕೆ ನಾನು, ಜಿ.ಟಿ. ದೇವೇಗೌಡ ಕಾರಣರಲ್ಲ. ಆ ಚುನಾವಣಾ ಪ್ರಚಾರಕ್ಕೆ ನಾನು ಹೋಗಿರಲಿಲ್ಲ. ಅದು ಜನತಾ ತೀರ್ಮಾನ ನಾನು ಕೂಡ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಹೇಳಿದರು.