ಸಿದ್ದರಾಮಯ್ಯ ಅವರ ಭಾವ ನಿಧನ…

70
firstsuddi

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾವ ಇಂದು ನಿಧನರಾಗಿದ್ದಾರೆ.

ಸಿದ್ದರಾಮಯ್ಯ ಅವರ ಸ್ವಂತ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ (69) ನಿಧನ‌ರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಿಗ್ಗೆ ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾಮೇಗೌಡ ತಮ್ಮ ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಮಗನನ್ನು ಅಗಲಿದ್ದಾರೆ. ಸಂಜೆ ವೇಳೆಗೆ ಸಿದ್ದರಾಮನ ಹುಂಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.