ಸಿನಿ ಪ್ರೇಮಿಗಳ ಗಮನ ಸೆಳೆದ ಹೊಸಬರ ಸಿನಿಮಾ ‘ಮುಗಿಲು’ ಮುಂದಿನ ತಿಂಗಳು ತೆರೆಗೆ…

621
firstsuddi
ಹಾಡುಗಳು ಮತ್ತು ಟ್ರೈಲರ್ ನಿಂದ ಸಿನಿ ಪ್ರೇಮಿಗಳ ಗಮನ ಸೆಳೆದ ಹೊಸಬರ ಸಿನಿಮಾ ‘ಮುಗಿಲು’ ಮುಂದಿನ ತಿಂಗಳು ತೆರೆಗೆ ಬರುತ್ತಿರುವ ಸಿನಿಮಾ
ಸಿನಿಮಾರಂಗಕ್ಕೆ ದಿನದಿಂದ ದಿನಕ್ಕೆ ಹೊಸ ಹೊಸ ಪ್ರತಿಭಾವಂತರು ಬರುತ್ತಿದ್ದು, ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ಪ್ರತಿಭಾವಂತ ತಂಡವೊಂದು ‘ಮುಗಿಲು’ ಸಿನಿಮಾ ಮಾಡಿದ್ದಾರೆ.
ಚಿತ್ರದ ಬಗ್ಗೆ
ಕನ್ನಡ ,ತೆಲುಗು, ತಮಿಳು , ಚಿತ್ರಗಳಲ್ಲಿ ಕೆಲಸ ಮಾಡಿರುವ ಅನುಭವವುಳ್ಳ  ಯುವ ನಿರ್ದೇಶಕ ಅರು ಕುಮಾರ್ ರವರು ಇದೇ ಮೊದಲ ಬಾರಿಗೆ ‘ಮುಗಿಲು’ ಎನ್ನುವ ಅಪ್ಪಟ ಕನ್ನಡ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ ಇದೀಗ ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, “ಗೂಡು ಇಲ್ಲದ ಪಕ್ಷಿ” ಎಂಬ ಸಾಲಿನ ಹಾಡು ಸಿನಿರಸಿಕರನ್ನು ಸೆಳೆಯುತ್ತಿದೆ. ಅಲ್ಲದೆ ಈ ಚಿತ್ರವು ಪ್ರಯೋಗಾತ್ಮಕ ಚಿತ್ರವಾಗಿದ್ದು ನಿರ್ದೇಶಕರು ಹೊಸ ರೀತಿಯಲ್ಲಿ ತಮ್ಮ ಕೈ ಚಳಕವನ್ನು ತೋರಿಸಿಕೊಟ್ಟಿದ್ದಾರೆ.
ಹೌದು, ಇತ್ತಿಚೆಗಷ್ಟೇ ’ಮುಗಿಲು’ ಚಿತ್ರದ ಹಾಡುಗಳನ್ನು ಅನಾಥಾಶ್ರಮ ಮತ್ತು ವೃದ್ದಾಶ್ರಮದಲ್ಲಿ ರಿಲೀಸ್ ಮಾಡಿದ್ದಲ್ಲದೇ ಚಿತ್ರದ ಹಾಡುಗಳನ್ನು ಕೇಳಲು ಸಖತ್ ಖುಷಿಯಾಗುತ್ತವೆ. ಹಾಡಿನ ಬೀಟ್ಸ್ ಕೇಳುಗರ ಮನ ಒಲಿಯುವಂತೆ ಮಾಡುತ್ತಿವೆ. ಅರು ಕುಮಾರ್ ಸಾಯಿ, ಚಕ್ರಿ, ಸೋಹನ್ ಸಾಹಿತ್ಯವಿರುವ ಈ ಹಾಡುಗಳಿಗೆ ಸಾಯಿ , ಚಕ್ರಿ, ವಿಹಾನ್ ಅಭ್ಯುದಯ, ಸಂಗೀತಾ ಶರತ್ ಧ್ವನಿ ನೀಡಿದ್ದು, ಹಾಡಿನ ತೂಕ ಹೆಚ್ಚಾಗಿವೆ.
ಹೊಸಬರ ತಂಡ
ಚಿತ್ರದಲ್ಲಿ ನೀನಾಸಂ ನ ಕಲಾವಿದ ಆರ್ಯ, ಕಾವ್ಯ, ರುಚಿತ್ ರಂಗನಾಥ್, ಸಂತೋಷ್ ಸಾರ್ಥಕ್ ,ವಿಲಾಸ್ ರಾವ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಬಿಗ್ ಬಾಸ್ ನ ಕಿರಿಕ್ ಕೀರ್ತಿ ಹಿನ್ನೆಲೆ ಧ್ವನಿ ನೀಡಿದ್ದು, ಸ್ಟನಿಂಗ್ ಬ್ರದರ್ಸ್ (ಸಾಯಿ ಮತ್ತು ಚಕ್ರಿ) ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನು ‘ಮುಗಿಲು’ ಚಿತ್ರದಲ್ಲಿ  ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆ ಇರುವುದರಿಂದ “ಕಣ್ ಹನಿಗಳ ಕಂಬನಿ” ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಜೊತೆಗೆ ಒ.ಎಸ್ ಬಿರಾದಾರ್, ರೇಖಾ ಭದ್ರಾವತಿ, ಮಿಮಿಕ್ರಿ ರಾಜ್ ಗೋಪಾಲ್, ರಾಘವೇಂದ್ರ ನಾಯ್ಕ್, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚೆನ್ನಕೇಶವ ಮೂರ್ತಿ ಎಂ. ಟಿ .ಬಂಡವಾಳ ಹೂಡಿದ್ದಾರೆ.
ಇನ್ನು ಚಿತ್ರದ ಹಾಡುಗಳು ಮತ್ತು ಟ್ರೈಲರ್ ಅನ್ನು ಲಹರಿ ಆಡಿಯೋ ಸಂಸ್ಥೆಯವರು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ, ಈ ಚಿತ್ರವು ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ಬರಲಿದೆ.