ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನೆನೆದು ಕಣ್ಣೀರಿಟ್ಟ ಮೇಕೆ…

793
firstsuddi

ಚಿಕ್ಕಮಗಳೂರು : ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಕುರಿಯೊಂದು ಪಾಲ್ಗೊಂಡು ಸ್ಥಳೀಯರನ್ನು ನಿಬ್ಬೆರಗಾಗುವಂತೆ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಕೊಪ್ಪ ಪಟ್ಟಣದ ಕುವೆಂಪು ನಗರದ ಮೀನು ವ್ಯಾಪಾರಿ ಹುಸೇನಬ್ಬ ಮೊನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ತೀರಿಕೊಂಡ ಕ್ಷಣದಿಂದ ಅವರ ಮೃತದೇಹದ ಬಳಿಯೇ ಇದ್ದ ಕುರಿ ಇಡೀ ರಾತ್ರಿ ಅಲ್ಲೇ ಕಳೆದು, ಮರು ದಿನ ಮೃತದೇಹವನ್ನು ಸ್ಮಶಾನಕ್ಕೆ ಕರೆದೊಯ್ಯುವ ಮಾರ್ಗದಲ್ಲೂ ಜನಸಾಮಾನ್ಯರಂತೆ ಜೊತೆಯಲ್ಲೇ ಬಂದು ಅಚ್ಚರಿ ಮೂಡಿಸಿದೆ. ಅಷ್ಟೆ ಅಲ್ಲದೇ, ಹುಸೇನ್ರವರ ಅಂತ್ಯ ಸಂಸ್ಕಾರ ಮಾಡುವುದನ್ನು ಇಣುಕಿ-ಇಣುಕಿ ನೋಡಿ, ಆತ್ಮೀಯ ಗೆಳೆಯನಿಗೆ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಕುರಿ ಹುಸೇನಬ್ಬ ಅವರದ್ದಲ್ಲ. ಅವರ ಪಕ್ಕದ ಮನೆಯವರು ದೇವರಿಗೆಂದು ಹರಕೆಗೆ ಬಿಟ್ಟಿದ್ದ ಕುರಿ. ದಿನದ ಹೆಚ್ಚಿನ ಸಮಯವನ್ನು ಹುಸೇನ್ ಜೊತೆಯೇ ಕಳೆಯುತ್ತಿದ್ದ ಕುರಿ ಅವರ ಸಾವಿನ ಬಳಿಕವೂ ಅಂತಿಮ ವಿದಾಯದವರೆಗೂ ಜೊತೆಗಿದ್ದು ಸಂತಾಪ ಸೂಚಿಸಿದೆ. ಸತ್ತ ಮೇಲೂ ದ್ವೇಷ ಸಾಧಿಸುವ ಜನರ ಮಧ್ಯೆ ನಾಲ್ಕು ದಿನ ಪ್ರೀತಿಯನ್ನು ನೆನೆದು ಕಣ್ಣೀರಿಟ್ಟ ಕುರಿಯ ಮನುಷ್ಯತ್ವ ಆಧುನಿಕ ಭಾರತಕ್ಕೆ ಮಾದರಿಯಾಗಿದೆ.