ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮತಿ…

59
firstsuddi

ನವದೆಹಲಿ : ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್(ಡಿಸಿಜಿಐ) ಅನುಮತಿ ನೀಡಿದೆ. ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸ್ಪುಟ್ನಿಕ್ ಲೈಟ್ ನ ಅನುಮತಿಯೊಂದಿಗೆ, ಈಗ ದೇಶದಲ್ಲಿ ಒಟ್ಟು 9 ಕೊರೊನಾ ಲಸಿಕೆಗಳನ್ನು ಬಳಸಲಾಗುತ್ತಿದೆ.

ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಅವರು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಕೋರಿದ್ದರು. ಲಸಿಕೆ ಉತ್ಪಾದನೆಗಾಗಿ ಡಾಕ್ಟರ್ ರೆಡ್ಡಿಸ್ ಕಂಪನಿಯು ರಷ್ಯಾದ ಸ್ಪುಟ್ನಿಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಲಸಿಕೆಯನ್ನು ಮಾಸ್ಕೋದ ಗಮಲಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದೆ. ಸ್ಪುಟ್ನಿಕ್ ಲೈಟ್ ಆವೃತ್ತಿಯು ಕೊರೊನಾ ವೈರಸ್ ವಿರುದ್ಧ ಶೇ.79.4ರಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ತಿಳಿದುಬಂದಿದೆ.