ಹಂಪಿ ಉತ್ಸವ ವೇಳೆ ಗಾಯಕ ಕೈಲಾಶ್ ಖೇರ್‌ ಮೇಲೆ ಬಾಟಲಿ ಎಸೆತ…

48
firstsuddi

ವಿಜಯನಗರ : ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ನಿನ್ನೆ ತೆರೆಬಿದ್ದಿದೆ. ಆದರೆ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್‌ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ.

ಕನ್ನಡ ಹಾಡು ಹಾಡಿಲ್ಲ ಎಂಬ ಕಾರಣಕ್ಕೆ ಕೈಲಾಶ್ ಖೇರ್‌ ಮೇಲೆ ಕೆಲವು ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಪುಂಡಾಟ ಮೆರೆದಿದ್ದಾರೆ. ಬಾಟಲಿ ಎಸೆದ ಬಳಿಕವೂ ಕೈಲಾಶ್ ಖೇರ್‌ ಗಾಯನ ಮುಂದುವರಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.