ಹಳಿ ಪಕ್ಕ ರೀಲ್ಸ್ ಮಾಡುವಾಗ ರೈಲು ಡಿಕ್ಕಿ – ಯುವಕನಿಗೆ ಗಂಭೀರ ಗಾಯ…

113
firstsuddi

ಹೈದರಾಬಾದ್ : ಯುವಕನೊಬ್ಬ ಹುಚ್ಚಾಟ ಮಾಡಲು ಹೋಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ರೈಲ್ವೇ ಹಳಿಯ ಪಕ್ಕ ಇನ್ ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುತ್ತಿದ್ದ ವೇಳೆ ಯುವಕನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.

ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್ ನಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರೀಲ್ಸ್ ಮಾಡಲು 11ನೇ ತರಗತಿಯ ವಿದ್ಯಾರ್ಥಿಯಾದ ಅಜಯ್ ರೈಲ್ವೆ ಹಳಿ ಪಕ್ಕ ನಡೆದುಕೊಂಡು ಹೋಗಿದ್ದಾನೆ. ಈ ವೇಳೆ ರಭಸವಾಗಿ ಬಂದ ರೈಲು ಅಜಯ್ ಗೆ ಗುದ್ದಿಕೊಂಡು ಹೋಗಿದೆ. ಇದರಿಂದ ಅಜಯ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಹಳಿಯಲ್ಲಿ ಅಜಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ, ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸದ್ಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.