ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನ: ವಿಐಪಿ ಸೇರಿ ಎಲ್ಲಾ ಪಾಸ್‍ಗಳನ್ನು ಮತ್ತೆ ಆರಂಭಿಸಿದ ಜಿಲ್ಲಾಡಳಿತ.

13

ಹಾಸನ: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದ್ದು ಸಂಪ್ರದಾಯದಂತೆ ನವೆಂಬರ್ 03 ರಂದು ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12:15 ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿತ್ತು. ಅಂದಿನಿಂದ ಇಂದಿನವರೆಗೂ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹಾಸನಾಂಬೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದೀಪಾವಳಿ ದಿನವೂ ದೇವಿಯ ದರ್ಶನಕ್ಕೆ ಭಕ್ತ ಗಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದೆ. ಹೀಗಾಗಿ ದೇವಾಲಯದ ಧರ್ಮದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ.
ದೇವಸ್ಥಾನದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನೂಕುನುಗ್ಗಲು ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ವಿಐಪಿ ಮತ್ತು ವಿವಿಐಪಿ ಪಾಸ್‍ಗಳನ್ನು ರದ್ದು ಮಾಡಿದ ಬಳಿಕ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪರಿಸ್ಥಿತಿ ಶಾಂತವಾಯಿತು ಎಂದು ತಿಳಿಸಿದ್ದಾರೆ. ನಾಳೆ ಬೆಳಗಿನ ಜಾವ 4 ಗಂಟೆವರೆಗೆ ನಿರಂತವಾಗಿ ದೇವಿ ದರ್ಶನಕ್ಕೆ ಭಕ್ತರಿಗೆ ಸಿಗಲಿದೆ. ಬಳಿಕ ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಈ ನಡುವೆ ರದ್ದು ಮಾಡಿದ್ದ ವಿಐಪಿ ಸೇರಿ ಎಲ್ಲಾ ರೀತಿಯ ಪಾಸ್ ಗಳನ್ನು ಜಿಲ್ಲಾಡಳಿತ ಮಂಡಳಿ ಮತ್ತೆ ಆರಂಭ ಮಾಡಿದೆ.