ಹಾಸನ  : ಆಟೋದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

646

ಹಾಸನ : ಆಟೋದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎಂ.ಜಿ. ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ವೈನ್ಸ್ ಸಮೀಪ ನಡೆದಿದ್ದು. ವಿವೇಕನಗರ ವಾಸಿ ಶಿವಕುಮಾರ್ (52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು.ಹಲವು ವರ್ಷಗಳಿಂದ ಆಟೋ ಚಾಲಕನಾಗಿದ್ದ ಎನ್ನಲಾಗಿದ್ದು ಇಂದು ಮಧ್ಯಾಹ್ನ ತನ್ನ ಆಟೋದಲ್ಲಿ ನೇಣಿಗೆ ಶರಣಾಗಿದ್ದು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.