ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ ; ಆತಂಕದಲ್ಲಿ ಗ್ರಾಮಸ್ಥರು…

13
firstsuddi

ಹಾಸನ : ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಲಘು ಭೂಕಂಪನ ಸಂಭವಿಸಿದೆ.

ಇಂದು ಬೆಳಗಿನ ಜಾವ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ನಿದ್ದೆಯಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಭೂಮಿ ಕಂಪನವಾದ ಹಿನ್ನೆಲೆ ಮನೆಗಳು ಬಿರುಕು ಬಿಟ್ಟಿದೆ. ಅಲ್ಲದೇ, ರಸ್ತೆಗಳು ಕೂಡ ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಅರಕಲಗೂಡು ತಾಲೂಕಿನ ಬೆಳವಾಡಿ, ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲೂ ಭೂಮಿ ನಡುಗಿದಂತೆ ಅಗಿದೆ. ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.