ಹಾಸನ : ನವೆಂಬರ್ 6ರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಡಾಂತರ- ಭ್ರಹ್ಮಾಂಡ ಗುರೂಜಿ ಭವಿಷ್ಯ…

768

ಹಾಸನ : ಹಾಸನಾಂಬೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭ್ರಹ್ಮಾಂಡ ಗುರೂಜಿ ನವೆಂಬರ್ 6ರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಡಾಂತರ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರು ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿರುತ್ತಾರೆ. ರಾಜ್ಯದಲ್ಲಿ ಈ ಹಿಂದೆ ಇದ್ದವರು ಮತ್ತೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ. ಮತ್ತೆ ಹೊಸ ಸರ್ಕಾರ ಬಂದರೆ ಹೊಸಬರೇ ಮುಖ್ಯಮಂತ್ರಿ ಆಗುತ್ತಾರೆ. ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಅವರಿಗೆ ಪೂರ್ಣ ಅವಕಾಶ ಇಲ್ಲವೇ ಇಲ್ಲ. ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮ ಸ್ಥಳಕ್ಕೆ ಸೇರಲೇಬೇಕು. ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಹತ್ತು ವರ್ಷಗಳ ನಡುವೆ ಒಮ್ಮೆ ಐದು ವರ್ಷ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದು, ಇದೇ ವೇಳೆ ಮುಂದೆ ಇನ್ನೂ ಪ್ರಕೃತಿ ವಿಕೋಪಗಳು ಆಗಲಿವೆ. ಜನರು ಎಚ್ಚರಿಕೆಯಿಂದ ಇರಲಿ ಎಂದು ಭವಿಷ್ಯ ನುಡಿದಿದ್ದಾರೆ.