ಹಾಸನ : ಭಾರೀ ಗಾಳಿ ಮಳೆಯಿಂದಾಗಿ ಕೋಳಿ ಫಾರಂ ಕಟ್ಟಡ ಧ್ವಂಸವಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗುಳ್ಳದಪುರ ಗ್ರಾಮದಲ್ಲಿ ನಡೆದಿದೆ. ನಿಂಗರಾಜು ಎಂಬುವವರಿಗೆ ಸೇರಿದ ಕೋಳಿ ಫಾರಂ ಹಾಗೂ ಕುಮಾರ್ ಎಂಬುವವರಿಗೆ ಸೇರಿದ ಕುರಿ ಫಾರಂ ಎಂದು ತಿಳಿದು ಬಂದಿದ್ದು, ವೇಗವಾಗಿ ಬೀಸಿದ ಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಎರಡೂ ಫಾರಂಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಘಟನೆಯಿಂದಾಗಿ ಲಕ್ಷಾಂತರ ರೂ ಮೌಲ್ಯ ನಷ್ಟವಾಗಿದೆ.










