ಹಾಸನ : ಸೆಸ್ಕಾಂ ಸಹಾಯಕ ಕಾರ್ಯಪಾಲಕ ಮಹಿಳಾ ಇಂಜಿನಿಯರ್ ಮೇಲೆ ಮಚ್ಚಿನಿಂದ ಹಲ್ಲೆ…

260
firstsuddi

ಹಾಸನ : ಹಾಸನದ ಸಂತೆಪೇಟೆಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲೈನ್ಮನ್ ಒಬ್ಬ ಸೆಸ್ಕಾಂ ಸಹಾಯಕ ಕಾರ್ಯಪಾಲಕ ಮಹಿಳಾ ಇಂಜಿನಿಯರ್(ಎಇಇ) ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮಂಜುನಾಥ್ ಎಂಬಾತನೇ ಈ ಕೃತ್ಯ ಎಸಗಿದ್ದು, ನಗರಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಘಟನೆಯಲ್ಲಿ ಸ್ವಾತಿ ದೀಕ್ಷಿತ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ತಲೆ, ಮುಖಭಾಗ ಮತ್ತು ಕುತ್ತಿಗೆಗೆ ಪೆಟ್ಟು ತಿಂದಿರುವ ಸ್ವಾತಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುನಾಥನ ಹುಚ್ಚಾಟದ ವೇಳೆ ಮಧ್ಯೆ ಪ್ರವೇಶಿಸಿ ಘಟನೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡ ಎಂಬುವರಿಗೂ ಪೆಟ್ಟು ಬಿದ್ದಿದ್ದು, ವಿದ್ಯುತ್ ವಿತರಣಾ ಕೇಂದ್ರದ ಲಾನ್ ಕ್ಲೀನ್ ಮಾಡುವಂತೆ ಸ್ವಾತಿ ಅವರು ಸೂಚಿಸಿದ ಕಾರಣಕ್ಕೇ ಮಂಜುನಾಥ್ ಕುಪಿತಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆದರೆ ಈ ಘಟನೆಯ ಹಿಂದೆ ಬೇರೆಯದೇ ಕುಮ್ಮಕ್ಕು ಇದೆ ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.