ಹೈದರಾಬಾದ್ : ಮತ್ಸ್ಯರೂಪದ ಮಗುವೊಂದು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ.
ಹೈದರಾಬಾದ್ ನ ಪೆಟ್ಲಾಬುರ್ಜ್ ನಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮತ್ಸ್ಯರೂಪದ ಮಗುವಿಗೆ ಜನ್ಮ ನೀಡಿದ್ದರು. ಆದರೆ ಹುಟ್ಟಿದ ಮಗುವಿಗೆ ವಿರೂಪಗಳು ತೀವ್ರವಾಗಿ ಬಾಧಿಸಿದ್ದರಿಂದ ಸಾವನ್ನಪ್ಪಿದೆ.
ಇಂತಹ ಶಿಶು ಜನಿಸುವುದು ಬಹಳ ಅಪರೂಪ ಹಾಗೂ ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ ಕಾಯಿಲೆಯಿಂದ ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತವೆ. ಇಂತಹ ಮಕ್ಕಳಲ್ಲಿ ಜಠರ, ಕರುಳು, ಮೂತ್ರಪಿಂಡ, ಬೆನ್ನುಮೂಳೆ ಸೇರಿದಂತೆ ದೇಹದ ಕೆಲ ಅಂಗಾಂಗಗಳು ಒಂದಕ್ಕೊಂದು ಅಂಟಿಕೊಂಡು, ಕಾಲುಗಳು ಕೂಡಿಕೊಂಡಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.










