ಹುಬ್ಬಳ್ಳಿಯಲ್ಲಿ ಕೊರೊನಾ ಸ್ಫೋಟ ; 21 ಮಂದಿಗೆ ವಕ್ಕರಿಸಿದ ಸೋಂಕು, ನಾಲ್ಕು ಶಾಲೆಗಳು ಬಂದ್…

67
firstsuddi

ಹುಬ್ಬಳ್ಳಿ : ನಗರದಲ್ಲಿ 21 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಒಂದು ಶಾಲೆಯಲ್ಲಿ 10, ಇನ್ನೊಂದರಲ್ಲಿ 8, ಮತ್ತೊಂದರಲ್ಲಿ 2, ಮಗದೊಂದರಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆ ನಗರದ ನಾಲ್ಕು ಶಾಲೆಗಳನ್ನು ಬಂದ್ ಮಾಡಲಾಗಿದೆ.

ಪಾಸಿಟಿವ್ ಬಂದ 21 ಜನರಲ್ಲಿ ನಾಲ್ವರು ಶಿಕ್ಷಕರು ಎನ್ನಲಾಗಿದೆ. ಸೋಂಕಿತರೆಲ್ಲರೂ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಯಾರಲ್ಲಿಯೂ ತೀವ್ರ ಲಕ್ಷಣಗಳು ಕಂಡು ಬಂದಿಲ್ಲ. ಮುಂದಿನ ಆದೇಶದವರೆಗೂ ನಾಲ್ಕು ಶಾಲೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಕೊರೊನಾ ದೃಢಪಟ್ಟವರ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸಿ ಟೆಸ್ಟ್ ಮಾಡಲಾಗುತ್ತಿದೆ.