ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಸಾವು…

48
firstsuddi

ಮಂಗಳೂರು: ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮಲಗಿದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.

ಹಫೀಜಾ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ನಿವಾಸಿಯಾದ ಉದ್ಯಮಿ ದಾವೂದ್ ಎಂಬವರ ಪುತ್ರಿ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹಫೀಜಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ನಿನ್ನೆ ಹಫೀಜಾ ತಡರಾತ್ರಿವರೆಗೂ ಓದಿಕೊಂಡು ಮಲಗಿದ್ದಾಳೆ. ಆದರೆ ಮುಂಜಾನೆ ಮಲಗಿದ್ದಲ್ಲಿಂದ ಎದ್ದೇಳಲೇ ಇಲ್ಲ, ಮಲಗಿದ ಸ್ಥಿತಿಯಲ್ಲೇ ಹಫೀಜಾ ಮೃತಪಟ್ಟಿರುವುದು ತಿಳಿದುಬಂದಿದೆ.