ಬೆಂಗಳೂರು : ಇಂದು ರಾಜ್ಯಸಭಾ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿಧಾನಸೌಧದದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರು ಮತದಾನ ಮಾಡುತ್ತಿರುವ ಬ್ಯಾಲೆಟ್ ಪೇಪರ್ ನ್ನು ಡಿ ಕೆ ಶಿವಕುಮಾರ್ ಗೆ ತೋರಿಸಿದ್ದಾರೆ ಎಂದು ಆರೋಪಿಸಿ ಅವರ ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ನಾಯಕರು ಚುನಾವಣಾಧಿಕಾರಿಗೆ ದೂರು ನೀಡಿವೆ.
ಶಾಸಕರು ಮತ ಚಲಾಯಿಸುವಾಗ ಆಯಾ ಪಕ್ಷದ ಏಜೆಂಟರಿಗೆ ಮಾತ್ರ ತೋರಿಸಬೇಕು, ಬೇರೆ ಪಕ್ಷದ ಏಜೆಂಟರಿಗೆ ತೋರಿಸಬಾರದು ಎಂಬ ನಿಯಮವಿದೆ. ಆದರೆ ಹೆಚ್ ಡಿ ರೇವಣ್ಣನವರು ಡಿ ಕೆ ಶಿವಕುಮಾರ್ ಗೆ ತೋರಿಸಿದ್ದಾರೆ ಎಂಬ ಆರೋಪವಿದೆ.
ನಾನೇಕೆ ಡಿ ಕೆ ಶಿವಕುಮಾರ್ ಗೆ ಬ್ಯಾಲೆಟ್ ಪೇಪರ್ ತೋರಿಸಲಿ, ನನಗೇನು ಹುಚ್ಚು ಹಿಡಿದಿದೆಯೇ, ನಾನು ನಮ್ಮ ಪಕ್ಷದ ಏಜೆಂಟ್ ಪುಟ್ಟರಾಜು ಅವರಿಗೆ ತೋರಿಸಿದ್ದೇನೆ ಹೊರತು ಡಿ ಕೆ ಶಿವಕುಮಾರ್ ಗೆ ತೋರಿಸಿಲ್ಲ, ಬೇಕಿದ್ದರೆ ವಿಡಿಯೊ ರೆಕಾರ್ಡು ತೆಗೆಸಿ ಪರಿಶೀಲಿಸಲಿ ಎಂದು ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.










