ಹೆಲಿಕಾಪ್ಟರ್ ದುರಂತ – ಪ್ರಾಣ ಕಳೆದುಕೊಂಡ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

60
firstsuddi

ಉಡುಪಿ : ತಮಿಳುನಾಡಿನ ಕುನೂರಿನಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ 13 ಮಂದಿ ಹುತಾತ್ಮರಾಗಿದ್ದಾರೆ. ಇದರಲ್ಲಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕೂಡ ಒಬ್ಬರಾಗಿದ್ದು, ಇವರು ಕಾರ್ಕಳದ ಅಳಿಯನಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಹರ್ಜಿಂದರ್ ಬಿಪಿನ್ ರಾವತ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಗ್ರಾಮದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೇಸ್ ಪ್ರಫುಲ್ಲಾ ಮಿನೇಜಸ್ ಅವರನ್ನು ವಿವಾಹವಾಗಿದ್ದರು.

ಪ್ರಪುಲ್ಲಾ ಅವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಹರ್ಜಿಂದರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ನಾಲ್ಕು ವರ್ಷದ ಹಿಂದೆ ಪ್ರಪುಲ್ಲಾ ದಂಪತಿ ಕಾರ್ಕಳಕ್ಕೆ ಬಂದಿದ್ದರು. ರಜೆ ಇದ್ದಾಗಲೆಲ್ಲ ಇಲ್ಲಿಗೆ ಬಂದು ಹೋಗುತ್ತಿದ್ದರು. ಪ್ರಫುಲ್ಲಾ ಕುಟುಂಬಸ್ಥರ ಜೊತೆ ಆತ್ಮೀಯ ಒಳನಾಟ ಹೊಂದಿದ್ದ ಹರ್ಜಿಂದರ್ ಸಿಂಗ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.