ಹೈದರಾಬಾದ್, ತೆಲಂಗಾಣದಲ್ಲಿ ಭಾರಿ ಮಳೆ-32 ಮಂದಿ ಬಲಿ…

210
firstsuddi

ಹೈದರಾಬಾದ್ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹೆಚ್ಚಾಗಿರುವ ಹಿನ್ನೆಲೆ, ತೆಲಂಗಾಣದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿ ಈವರೆಗೆ 32 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಹೈದರಾಬಾದ್ ನ ಹೊರವಲಯಗಳಲ್ಲಿ ಮನೆ ಗೋಡೆಗಳು ಕುಸಿದು, ಕಾಲುವೆಗಳಲ್ಲಿ ಕೊಚ್ಚಿ ಹೋಗಿ 9 ಮಂದಿ ನಾಪತ್ತೆಯಾಗಿದ್ದಾರೆ. ಗಂಗನ್ ಪಹಾಡ್ ಎಂಬಲ್ಲಿ ಮೂವರು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಮೈಲಾರ್ದೇವಪಲ್ಲಿಯಲ್ಲಿ ಇಬ್ಬರು, ಬಂಜಾರಾ ಹಿಲ್ಸ್ ನಲ್ಲಿ ವೈದ್ಯರೊಬ್ಬರು ದಿಲ್ಯುಕ್ಸ್ ನಗರದಲ್ಲಿ ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿ ಮೂರು ವರ್ಷದ ಮಗು ನೀರಿನಲ್ಲಿ ಕೊಚ್ಚಿ ಹೋಗಿದೆ. ಹೀಗೆ ಹೈದರಾಬಾದ್ ನಲ್ಲಿಯೇ ಒಟ್ಟು 25 ಮಂದಿ ಮಳೆಯಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ.