ಹೊಸಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಒಂದು ಕೋಟಿ ರೂ. ದೇಣಿಗೆ ನೀಡುತ್ತೇನೆಂದ ಅಭಿಮಾನಿ.

71
firstsuddi

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಎರಡು ಎಕರೆ ಹೊಲ ಮಾರಿ ಒಂದು ಕೋಟಿ ರೂ. ದೇಣಿಗೆ ನೀಡುವುದಾಗಿ ಅಭಿಮಾನಿಯೊಬ್ಬರು ಘೋಷಿಸಿದ್ದಾರೆ.

ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಅಭಿಮಾನಿ ಕೆ.ಎಸ್. ಮಲಿಯಪ್ಪ ಈ ರೀತಿ ಹೇಳಿದ್ದಾರೆ. ವಿಜಯನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಖಂಡಿತ ಗೆಲ್ಲುತ್ತಾರೆ ಎಂಬ ಭರವಸೆ ಇದೆ. ಆ ಕಾರಣದಿಂದ ನಾನು ಹಣ ಹೊಂದಿಸಿಕೊಡುತ್ತೇನೆ. ನನಗೆ ಆರು ಎಕರೆ ಹೊಲ ಇದೆ. ಅದರಲ್ಲಿ ಎರಡು ಎಕರೆ ಮಾರಾಟ ಮಾಡಿ ದೇಣಿಗೆ ನೀಡುತ್ತೇನೆ ಎಂದು ಸಿದ್ದರಾಮಯ್ಯಗೆ ವಿಶೇಷ ಆಫರ್ ನೀಡಿದ್ದಾರೆ.