ಹೌದು ನಾನು ಕಳ್ಳನೇ ಹೋಗಿ ದೂರು ನೀಡಲು ಹೇಳಿ : ರಮೇಶ್ ಕುಮಾರ್.

444
firstsuddi

ಬೆಂಗಳೂರು : ರಮೇಶ್ ಕುಮಾರ್ ಕಳ್ಳ ಎಂಬ ಮುನಿಯಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ಹೌದು ನಾನು ಕಳ್ಳನೇ ಹೋಗಿ ದೂರು ನೀಡಲು ಹೇಳಿ. ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಯಿಸುವುದಿಲ್ಲ. ಜನರ ಸಮಸ್ಯೆಗಳು ಬೇಕಾದಷ್ಟಿದೆ. ಇರುವಷ್ಟು ದಿನ ದೇಶಕ್ಕೆ, ಜನರ ಸಮಸ್ಯೆಗಳಿಗೆ ಕೆಲಸ ಮಾಡೋದಷ್ಟೇ ನನ್ನ ಉದ್ದೇಶ. ಇತರೆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪರ್ಯಾಯ ಕೊಡುವುದಕ್ಕೆ ಜನರು ರೆಡಿ ಇದ್ದಾರೆ. ಬದಲಾವಣೆ ಯಾವುದೇ ಪಕ್ಷಗಳು ತಯಾರಿಲ್ಲ. ರಾಜಕಾರಣಿಗಳಾದ ನಮಗೆ ಎರಡು ಮುಖಗಳಿವೆ. ನನ್ನ ಹೇಳಿಕೆ ಸಹಿಸದಿದ್ದರೆ ನನ್ನ ಪಕ್ಷ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಕಾಂಗ್ರೆಸ್ ಸಿಡಬ್ಲ್ಯೂಸಿ ಅತ್ಯಂತ ಸರ್ವೊಚ್ಛ ಸಮಿತಿ. ಸಿಡಬ್ಲ್ಯೂಸಿ ನಲ್ಲಿ ಚಂದ್ರಶೇಖರ್ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರು. ಅದು ಚಂದ್ರಶೇಖರ್ ಅವರ ಗುಣವನ್ನು ತೋರಿಸುತ್ತದೆ. ಆದರೆ ಮಾಧ್ಯಮಗಳು ವಿಲನ್ ರನ್ನು ಹೀರೋ ಮಾಡುತ್ತಾರೆ. ಹೀರೋಗಳನ್ನು ವಿಲನ್ ಮಾಡುತ್ತಾರೆ. ಮಾಧ್ಯಮಗಳಿಗೆ ಅದೇ ಕೆಲಸ, ಬೇರೆ ಕೆಲಸ ಇಲ್ಲ. ನಮ್ಮ ಬಗ್ಗೆ ಏನಾದರು ಬರೆದುಕೊಳ್ಳಿ ನನಗೇನು ಚಿಂತೆ ಇಲ್ಲ. ಒಂದು ದಿನ ಓದುತ್ತಾರೆ, ಮರುದಿನ ಎಳೆ ಮಕ್ಕಳು ಅದನ್ನು ಯಾವುದಕ್ಕಾದರೂ ಉಪಯೋಗಿಸುತ್ತಾರೆ ಎಂದು ಮಾಧ್ಯಮದವರ ವಿರುದ್ಧ ಕಿಡಿಕಾರಿದರು.