ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ಮುರಳಿ ವಿಜಯ್.

77
firstsuddi

ಮುಂಬೈ : ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ವಿಜಯ್ ಕೊನೆಯದಾಗಿ ಭಾರತಕ್ಕಾಗಿ 2018ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‍ನಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ಬಳಿಕ ಫಾರ್ಮ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್, ನನ್ನ 2002 ರಿಂದ 2018ರ ವರೆಗಿನ ಕ್ರಿಕೆಟ್ ಪಯಣಕ್ಕೆ ಅಂತ್ಯವಾಡುತ್ತಿದ್ದೇನೆ. ಈವರೆಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ್ದ ಬಿಸಿಸಿಐ, ತಮಿಳುನಾಡು ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್, ಚೆಂಪ್ಲಾಸ್ಟ್ ಸನ್ಮಾರ್ ಗೆ ಧನ್ಯವಾದಗಳು. ನನ್ನ ಕನಸು ನನಸಾಗಲು ಸಹಕರಿಸಿದ ಕೋಚ್, ಮೆಂಟರ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಒಟ್ಟು 61 ಟೆಸ್ಟ್, 17 ಏಕದಿನ, 9 ಟಿ20 ಸೇರಿ ಒಟ್ಟು 87 ಪಂದ್ಯದಿಂದ 4,490 ರನ್ ಸಿಡಿಸಿದ್ದಾರೆ. 61 ಟೆಸ್ಟ್ ಪಂದ್ಯದಿಂದ 3,982 ರನ್ ಹೊಡೆದು ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು.