ಚಿಕ್ಕಮಗಳೂರು: ಪ್ರಸಕ್ತ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ನಗರದ ಎಂ.ಇ.ಎಸ್, ಎಂ.ಎಸ್.ಪಿ.ಎಸ್ ಪ್ರಥಮ ದರ್ಜೆ ಕಾಲೇಜಿಗೆ ಮೂರು ರ‍್ಯಾಂಕ್ ಲಭಿಸಿದೆ.
ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿನಿ ಸಿ.ಎಂ. ಅನ್ನಪೂರ್ಣ ಶೇ.92ರಷ್ಟು ಅಂಕ ಗಳಿಸಿ ಐದನೇ ರ‍್ಯಾಂಕ್ ಪಡೆದಿದ್ದಾರೆ.
ಬಿ.ಎ. ವಿದ್ಯಾರ್ಥಿ ಸಯ್ಯದ್ ಸಲ್ಮಾನ್ ಶೇ.88.42 ಅಂಕದೊಂದಿಗೆ ಆರನೇ ರ‍್ಯಾಂಕ್ ಮತ್ತು ಬಿ.ಸಿ.ಎ ವಿದ್ಯಾರ್ಥಿ ಎಂ.ಸಿ. ಅಂಜಲಿ ಶೇ.91.38 ಅಂಕ ಗಳಿಸಿ 7ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|ಡಿ.ಎಲ್. ವಿಜಯಕುಮಾರ್ ತಿಳಿಸಿದ್ದಾರೆ.










