ಅಂತ್ಯಸಂಸ್ಕಾರಕ್ಕೆ ತೆರಳಿದವರ ಮೇಲೆ ಸ್ಮಶಾನದ ಮೇಲ್ಚಾವಣಿ ಕುಸಿದು ಬಿದ್ದು 23 ಮಂದಿ ಸ್ಥಳದಲ್ಲೇ ಸಾವು…

196
firstsuddi

ಉತ್ತರ ಪ್ರದೇಶ : ಅಂತ್ಯಸಂಸ್ಕಾರಕ್ಕೆ ತೆರಳಿದವರ ಮೇಲೆ ಸ್ಮಶಾನದ ಮೇಲ್ಚಾವಣಿ ಕುಸಿದು ಬಿದ್ದು 23 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಫಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತರು ಮುರಾದಾಬಾದ್‍ನಲ್ಲಿ ಜೈರಾಂ ಎಂಬುವವರ ಅಂತ್ಯಸಂಸ್ಕಾರಕ್ಕೆ ತೆರಳಿದ್ದು, ಈ ವೇಳೆ ಮಳೆ ಹೆಚ್ಚಾಗಿದ್ದರಿಂದ ಪಕ್ಕದಲ್ಲಿ ಇದ್ದ ಕಟ್ಟಡವೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ವೇಳೆ ಭಾರಿ ಮಳೆಯಿಂದ ತೇವಗೊಂಡಿದ್ದ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಪರಿಣಾಮ 23 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15 ಮಂದಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿ ಕಾರ್ಯಚರಣೆ ಮುಂದುವರೆಸಿದ್ದಾರೆ..