ಅಕ್ರಮ ಗಣಿಗಾರಿಕೆ ಕೇಸ್ – ಜಾರ್ಖಂಡ್ ಸಿಎಂ ಆಪ್ತನ ಬಂಧನ…

137
firstsuddi

ರಾಂಚಿ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಪ್ತರು ಎನ್ನಲಾದ ಉದ್ಯಮಿ ಪ್ರೇಮ್ ಪ್ರಕಾಶ್ ನನ್ನು ಇಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ನಿನ್ನೆ ವಸುಂಧರಾ ಅಪಾರ್ಟ್ಮೆಂಟ್ ನಲ್ಲಿರುವ ಪ್ರಕಾಶ್ ಅವರ ಫ್ಲಾಟ್, ಹರ್ಮು ಚೌಕ್ ಬಳಿಯ ಅವರ ನಿವಾಸ ‘ಶೈಲೋದಯ’ ಮತ್ತು ಹರ್ಮುನಲ್ಲಿರುವ ಅವರ ಕಚೇರಿ ಸೇರಿದಂತೆ ರಾಂಚಿಯ 11 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ – ಎನ್‌ಸಿಆರ್‌ನ ಸುಮಾರು 17-20 ಸ್ಥಳಗಳಲ್ಲಿ ಕೇಂದ್ರ ಸಂಸ್ಥೆ ದಾಳಿ ನಡೆಸಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ನಡೆಯುತ್ತಿರುವ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೇಂದ್ರೀಯ ಸಂಸ್ಥೆ ಎರಡು ಎಕೆ 47 ರೈಫಲ್ಸ್ ಮತ್ತು 60 ಲೈವ್ ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿತ್ತು. ಪ್ರೇಮ್ ಪ್ರಕಾಶ್ ಅವರ ನಿವಾಸದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ.