ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶ ಕಾರ್ಮಿಕರ ರಕ್ಷಣೆ…

91
firstsuddi

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶದ ಕಾರ್ಮಿಕರನ್ನು ಇಂಡಿ ಪೊಲೀಸರು ರಕ್ಷಿಸಿದ್ದಾರೆ.

ಗುಬ್ಬೇವಾಡ ಗ್ರಾಮದ ಜಮೀನು ಮಾಲಿಕ ಬಿರಾದಾರ್ ಹಾಗೂ ಮಧ್ಯಪ್ರದೇಶದ ರೋಹಿತ್ ಎನ್ನುವ ವ್ಯಕ್ತಿ ಕಾರ್ಮಿಕರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದರು. ಬಂಧನದಲ್ಲಿಟ್ಟ ಕಾರ್ಮಿಕರಿಂದ 100 ಟನ್ ಕಬ್ಬು ಕಟಾವು ಮಾಡಿಸಿದ್ದರು. 400 ಟನ್ ಕಬ್ಬು ಕಟಾವಿಗೆ ಬೆದರಿಕೆ ಹಾಕಿದ್ದರು. ರಕ್ಷಣೆಗಾಗಿ ಕಾರ್ಮಿಕರು ಮಧ್ಯಪ್ರದೇಶ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದರು. ನಂತರ ಮಧ್ಯಪ್ರದೇಶದ ಡಿಸಿ ವಿಜಯಪುರ ಎಸ್ಪಿ ಆನಂದ ಕುಮಾರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಬಳಿಕ ಎಸ್ಪಿ ಆನಂದ ಕುಮಾರ್ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿಗೆ ಕಾರ್ಮಿಕರ ರಕ್ಷಣೆಗೆ ಆದೇಶಿಸಿದ್ದಾರೆ. ಈ ಹಿನ್ನಲೆ ತಡರಾತ್ರಿ ಜಮೀನಿಗೆ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು, 35 ಕಾರ್ಮಿಕರು, 10 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರನ್ನು ಅಲ್ಲಿಂದ ರೈಲು ಮೂಲಕ ಮಧ್ಯಪ್ರದೇಶಕ್ಕೆ ರವಾನೆ ಮಾಡಲಾಗಿದೆ.