ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಶಾಲಾ ವಿದ್ಯಾರ್ಥಿನಿ…

55
firstsuddi

ಬೆಂಗಳೂರು : ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿ ನಡೆದಿದೆ.

ನಿಶ್ಚಿತಾ(11) ಮೃತ ಬಾಲಕಿ. ಇನ್ನೂ ನಿಶ್ಚಿತಾಳ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ನಿಶ್ಚಿತಾ ತನ್ನ ಸ್ಕೂಲ್ ನಲ್ಲೇ ಓದುತ್ತಿದ್ದ ತಮ್ಮನನ್ನು ಮಧ್ಯಾಹ್ನ 1:30ರ ವೇಳೆ ಹೊರಗೆ ಕರೆದುಕೊಂಡು ಬಂದು ಅಜ್ಜಿ ಜೊತೆಗೆ ಬಿಟ್ಟು ಹೋಗಿದ್ದಳು. ಆದರೆ 1:50ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಸ್ಕೂಲ್ ನ ಹೊರಗೆ ತಂದಿದ್ದಾರೆ.

ಸಿಬ್ಬಂದಿಯೇ ಬೈಕ್ ವೊಂದರಲ್ಲಿ ಕೂರಿಸಿಕೊಂಡು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ನಿಶ್ಚಿತಾ ಮೃತಪಟ್ಟಿರುವ ವಿಚಾರ ತಿಳಿಸಿದ ನಂತರ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ನಿಶ್ಚಿತಾ ಅಜ್ಜಿ ನರಸಮ್ಮ. ನಮ್ಮ ಮಗುವಿನ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಗ ಮಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಈ ಹಿಂದೆ ಕೂಡ ಡೆಸ್ಟರ್ ನಿಂದ ಹೊಡೆದಿದ್ದರು ಮತ್ತು ನಿನ್ನೆ ಕೂಡ ಹೊಡೆದಿದ್ದಾರೆ. ಅದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಆರ್ ಡಿ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಿಸಲಾಗಿದೆ.