ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವೈದ್ಯ ; ಮಾನವೀಯತೆ ಮರೆತ ಶಾಸಕ..!

195
firstsuddi

ಚಿಕ್ಕಮಗಳೂರು : ಅಪಘಾತದಲ್ಲಿ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರೂ ಶಾಸಕರೊಬ್ಬರು ಕಾರಿನಿಂದ ಇಳಿಯದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಈ ವೇಳೆ ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಅವರು ಅದೇ ದಾರಿಯಲ್ಲಿ ಲಕ್ಕವಳ್ಳಿಯಿಂದ ತರೀಕೆರೆಗೆ ಬರ್ತಿದ್ದರು. ಅಪಘಾತ ಕಂಡ ಶಾಸಕರು, ಕಾರಿನಿಂದ ಕೆಳಗಿಳಿಯದೇ ಸುಮ್ಮನಾಗಿದ್ದಾರೆ. ಕೊನೆಗೆ ಗಾಯಾಳು ವೈದ್ಯರನ್ನು ಆಂಬ್ಯುಲೆನ್ಸ್ ನಲ್ಲಿ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡುವಾಗ ಮಾರ್ಗಮಧ್ಯೆದಲ್ಲೇ ಡಾ. ರಮೇಶ್ ಪ್ರಾಣ ಬಿಟ್ಟಿದ್ದಾರೆ. ಕಣ್ಣು ಮುಂದೆ ಪ್ರಾಣ ಹೋಗುತ್ತಿದ್ದರು ಮಾನವೀಯತೆ ತೋರದ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.