ಅಮೆರಿಕದಲ್ಲಿ ಭಾರತ ಮೂಲದ ನಾಲ್ವರ ಅಪಹರಣ…

49
firstsuddi

ವಾಷಿಂಗ್ಟನ್ : ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಭಾರತೀಯ ಮೂಲದ ನಾಲ್ವರನ್ನು ಅಪಹರಿಸಲಾಗಿದೆ.

ಜಸ್ದೀಪ್ ಸಿಂಗ್ (36), ಜಸ್ಲೀನ್ ಕೌರ್ (27), ಮತ್ತವರ ಪುತ್ರಿ ಅರೂಹಿ ಧೇರಿ(8 ತಿಂಗಳು) ಮತ್ತು ಅಮನ್ ದೀಪ್ ಸಿಂಗ್(39) ಅವರ ಅಪಹರಣ ಆಗಿದೆ. ಇನ್ನು ಕಿಡ್ನ್ಯಾಪ್ ಮಾಡಿದವರು ಶಸ್ತ್ರಸಜ್ಜಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಹೆದ್ದಾರಿ 59 ರ 800 ಬ್ಲಾಕ್ ನಿಂದ 4 ಜನರನ್ನು ಬಲವಂತವಾಗಿ ಅಪಹರಿಸಲಾಗಿದೆ. ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್ ಗಳು ಇರುವ ಹೆಚ್ಚು ಜನ ಓಡಾಡುವ ಪ್ರದೇಶದಿಂದಲೇ ಈ ಕುಟುಂಬವನ್ನು ಅಪಹರಿಸಲಾಗಿದೆ. ಆದರೆ ಶಸ್ತ್ರಗಳನ್ನು ಹೊಂದಿರುವ ಅಪಹರಣಕಾರರು ಅತ್ಯಂತ ಅಪಾಯಕಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

2019ರಲ್ಲಿ ಅಮೆರಿಕದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ಮಾಲೀಕರಾಗಿದ್ದ ಭಾರತೀಯ ಮೂಲದ ಟೆಕ್ಕಿ ತುಷಾರ್ ಆತ್ರೆ ಎಂಬವರು ಅವರ ಪ್ರೇಯಸಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೊಲೆಯಾಗುವ ಒಂದು ಗಂಟೆಗೆ ಮುಂಚೆಯಷ್ಟೇ ಕ್ಯಾಲಿಫೋರ್ನಿಯಾದ ಅವರ ಐಷಾರಾಮಿ ಮನೆಯಿಂದ ಅವರನ್ನು ಅಪಹರಿಸಲಾಗಿತ್ತು.