ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ಖಾತೆ 2 ವರ್ಷ ರದ್ದು…

80
firstsuddi

ವಾಷಿಂಗ್ಟನ್ : ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಖಾತೆಯನ್ನು 2 ವರ್ಷ ರದ್ದು ಮಾಡಲಾಗಿದೆ.

ಜನವರಿ 6ರಂದು ಅಮೆರಿಕ ಸಂಸತ್ ಭವನದ ಮೇಲೆ ನಡೆದ ದಂಗೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದ ಫೇಸ್ ಬುಕ್ ಪೋಸ್ಟ್ ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್ ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು ಮುಂದಿನ 2 ವರ್ಷಗಳ ಕಾಲ ರದ್ದು ಮಾಡಿದೆ.

ಫೇಸ್ ಬುಕ್ ಸಂಸ್ಥೆ ತಿಳಿಸಿರುವಂತೆ ಡೊನಾಲ್ಡ್ ಟ್ರಂಪ್ ಅವರ ವರ್ತನೆ ಫೇಸ್ ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಹಾಗಾಗಿ ಫ್ರೋಟೋಕಾಲ್ ಗಳ ಅನ್ವಯ ಅವರ ಖಾತೆಯನ್ನು 2023ರ ಜನವರಿವರೆಗೆ ಅಮಾನತು ಮಾಡಲಾಗಿದೆ ಎಂದು ಫೇಸ್ ಬುಕ್ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಬ್ಲಾಗ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಫೇಸ್ ಬುಕ್ ನಲ್ಲಿ ಟ್ರಂಪ್ ಅವರ ಖಾತೆ ಸಂಪೂರ್ಣ ರದ್ದಾಗುವುದಿಲ್ಲ.ಅವರ ಹಿಂದಿನ ಪೋಸ್ಟ್ ಗಳನ್ನು ಇತರರು ಓದಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಹೊಸ ಹೊಸ ಪೋಸ್ಟ್ ಮಾಡುವುದನ್ನು ಮಾತ್ರ ನಿಷೇಧಿಸಿದೆ ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ.