ಅರಣ್ಯ ಇಲಾಖೆಯ ಭೂಮಿಯನ್ನು ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿ ವಾಪಸ್: ಈಶ್ವರ್ ಖಂಡ್ರೆ.

45
firstsuddi

ಬೆಂಗಳೂರು: ಕಾಫಿ, ಚಹಾ, ರಬ್ಬರ್ ಬೆಳೆಯಲು ಅರಣ್ಯ ಇಲಾಖೆಯ ಭೂಮಿಯನ್ನು ಲೀಸ್​ಗೆ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿಯನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸ್ವಾತಂತ್ರ್ಯ ಪೂರ್ವದಲ್ಲಿ ಕಾಫಿ, ಚಹಾ, ರಬ್ಬರ್ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಲೀಸ್​ಗೆ ನೀಡಲಾಗಿತ್ತು ಎಂದರು.

ಲೀಸ್ ಹಣ ಬರದೇ ಇದ್ದ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ ಈಶ್ವರ್ ಖಂಡ್ರೆ, ಎಕರೆಗೆ ಕೇವಲ ಎರಡು ರೂಪಾಯಿಯಿಂದ ಏಳು ರೂಪಾಯಿ ಅಂತ ನಿಗದಿ ಮಾಡಿಕೊಡಲಾಗಿತ್ತು. 1997 ರಲ್ಲಿ ಎಕ್ಟೇರ್​ಗೆ ಐದು ಸಾವಿರ ಅಂತ ನಿಗದಿ ಮಾಡಲಾಗಿತ್ತು. ಆ ಪ್ರಕಾರ ಲೀಸ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲಾಗುತ್ತದೆ ಎಂದರು.

ಮರ್ಕೆರಾ ಕಂಪನಿ 1575 ಎಕರೆ ಭೂಮಿಯನ್ನು ಲೀಸ್​ಗೆ ಪಡೆದುಕೊಂಡಿದ್ದು, ಥಾಮ್ಸನ್ ರಬ್ಬರ್ ಲಿ. 625 ಎಕರೆ, ನಿಲಂಬೂರ್ ರಬ್ಬರ್ 713 ಎಕರೆ, ಪೋರ್ಟ ಲ್ಯಾಂಡ್ ರಬ್ಬರ್ ಲಿ. 1288 ಎಕರೆ, ಗ್ಲೆನ್ ಲಾರೆನ್ಸ್ ಪ್ರೈ.ಲಿ. ಮತ್ತು ಟಾಟಾ ಕಂಪನಿ 943 ಎಕರೆ, ಚಾಮರಾಜನಗರದ ಹೊನ್ನಮಟ್ಡಿ ನೀಲಗಿರಿ ಪ್ಲಾಂಟೇಷನ್ ಲಿ. 184 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿದೆ. ಒಟ್ಟಾರೆ ಎರಡು ಸಾವಿರ ಕೋಟಿಗೂ ಅಧಿಕ ಲೀಸ್ ಹಣವನ್ನು ಕಂಪನಿಗಳು ಪಾವತಿ ಮಾಡಬೇಕಿದೆ. ಈ ಪೈಕಿ ಕೆಲವರು ಬಾಕಿ ಪಾವತಿಸುವ ಬದಲಿಗೆ ಕೋರ್ಟ್ ಮೊರೆ ಹೋಗಿದ್ದರು ಎಂದರು.

ಮರಗಳನ್ನು ಕಡಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹರನ್ನು ಬಂಧಿಸಲಾಗಿತ್ತು. ಆದರೆ, ಅವರ ಹೆಸರು ಎಫ್​ಐಆರ್​ನಲ್ಲಿ ಇಲ್ಲದಿರುವುದು ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಪ್ರಕರಣದ ಬಗ್ಗೆ ಮಾತನಾಡಿದ ಈಶ್ವರ್ ಖಂಡ್ರೆ, ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ನನ್ನ ಪ್ರಭಾವ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.