ಅರುಣಾಚಲ ಪ್ರದೇಶದಲ್ಲಿ ಹಿಮದಡಿ ಸಿಲುಕಿ ನಾಪತ್ತೆಯಾಗಿದ್ದ ಏಳು ಸೈನಿಕರ ಮೃತದೇಹ ಪತ್ತೆ…

81
firstsuddi

ನವದೆಹಲಿ : ಅರುಣಾಚಲ ಪ್ರದೇಶದ ಪಶ್ಚಿಮ ತುದಿಯಲ್ಲಿರುವ ಕಾಮೆಂಗ್ ನಲ್ಲಿ ಹಿಮದಡಿ ಸಿಲುಕಿ ನಾಪತ್ತೆಯಾಗಿದ್ದ ಏಳು ಮಂದಿ ಭಾರತೀಯ ಸೈನಿಕರ ಮೃತದೇಹಗಳು ಪತ್ತೆಯಾಗಿವೆ.

ಫೆಬ್ರವರಿ 6ರಂದು ಕಮೆಂಗ್ ಸೆಕ್ಟರ್ ನ ಹಿಮಚ್ಚಾದಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಏಳು ಸೈನಿಕರು ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ವಿಶೇಷ ತಂಡವನ್ನು ಏರ್ಲಿಫ್ಟ್ ಮಾಡಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ಶೋಧ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದ್ದು, 7 ಸೈನಿಕರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಗಡಿಗೆ ಹೊಂದಿಕೊಂಡಿರುವ 14,500 ಅಡಿ ಎತ್ತರದಲ್ಲಿರುವ ಕಮೆಂಗ್ ವಲಯದಲ್ಲಿ ಕೆಲ ದಿನಗಳಿಂದ ಭಾರಿ ಹಿಮಪಾತ, ಪ್ರತಿಕೂಲ ಹವಾಮಾನ ಉಂಟಾಗಿತ್ತು.