ಆಕ್ಸಿಜನ್ ಟ್ಯಾಂಕ್ ಸೋರಿಕೆ ; 22 ರೋಗಿಗಳ ದರ್ಮರಣ…

117
firstsuddi

ಮುಂಬೈ: ಆಕ್ಸಿಜನ್ ಟ್ಯಾಂಕ್ ಸೋರಿಕೆಯಿಂದಾಗಿ 22 ರೋಗಿಗಳು ಸಾವನ್ನಪ್ಪಿರುವ ಘಟನೆ ನಾಸಿಕ್ ನಗರದ ಡಾ.ಝಾಕೀರ್ ಹುಸೈನ್ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಸೋರಿಕೆಯಿಂದಾಗಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ವೆಂಟಿಲೇಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿನ 80 ರೋಗಿಗಳ ಪೈಕಿ 31 ರೋಗಿಗಳನ್ನ ಇದೀಗ ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ಆಕ್ಸಿಜನ್ ಸೋರಿಕೆಯನ್ನು ನಿಯಂತ್ರಿಸಲಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗುತ್ತದೆ ಎಂದು ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಹೇಳಿದ್ದಾರೆ.