ಆಜಾನ್ ನಿರ್ಬಂಧಿಸಲು ಸರ್ಕಾರಕ್ಕೆ ಏ.13ರವರೆಗೆ ಗಡುವು ನೀಡಿದ ಪ್ರಮೋದ್ ಮುತಾಲಿಕ್.

60
firstsuddi

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ನಿಂದ ಆರಂಭವಾದ ವಿವಾದ ಇದೀಗ ಅಜಾನ್ ವರೆಗೂ ಬಂದು ನಿಂತಿದೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಏಪ್ರಿಲ್ 13ರವರೆಗೆ ಗಡುವು ನೀಡಿದ್ದಾರೆ. ಕೂಡಲೇ ಅಜಾನ್ ನಿರ್ಬಂಧ ಕೈಗೊಳ್ಳಬೇಕು. ಸರ್ಕಾರ ಕ್ರಮಕೈಗೊಳ್ಳದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಇನ್ನೂ ಏಪ್ರಿಲ್ 14 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಮಸೀದಿಗಳ ಮೇಲೆ ಮೈಕಾಸುರರ ಹಾವಳಿ ಬಹಳ ಜೋರಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮೈಕ್ ಹಚ್ಚದಂತೆ ಆದೇಶ ಆದರೂ ಕೂಡ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ. ಸರ್ಕಾರ ಕೂಡ ಈ ನಿಯಮವನ್ನು ಜಾರಿಗೆ ತರುತ್ತಿಲ್ಲ. ಇನ್ನಾದ್ರು ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.