ಉತ್ತರ ಕನ್ನಡ: ಆಟವಾಡುತ್ತಾ ಇಟ್ಟಿಗೆ ತಯಾರಿಕೆಗೆ ಶೇಖರಿಸಿಟ್ಟಿದ್ದ ನೀರಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದೂರಿನ ಮಾನ್ವಿತ ಮಲ್ಲಿಕಾರ್ಜುನ ಹೊಸೂರ(3) ಮೃತ ಮಗು, ಇನ್ನು ಮಗುವಿನ ತಾಯಿ ಮಾನ್ವಿತಳನ್ನು ತನ್ನ ಜೊತೆಗೆ ಇಟ್ಟಿಗೆ ಕೆಲಸಕ್ಕೆ ಕರೆತಂದಿದ್ದಳು. ತಾಯಿ ತನ್ನ ಕೆಲಸದಲ್ಲಿ ನಿರತಳಾಗಿದ್ದಾಗ ಮಗು ಮಾನ್ವಿತ ನೀರಿಗೆ ಬಿದ್ದು ಕೊನೆಯುಸಿರೆಳೆದಿದೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.










