ಆರ್‌ಬಿಐ ರೆಪೊ ದರ ಮತ್ತೆ ಹೆಚ್ಚಳ – ಸಾಲದ ಮೇಲಿನ ಇಎಂಐ ಮತ್ತಷ್ಟು ದುಬಾರಿ…

55
firstsuddi

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಿದೆ. ರೆಪೊ ದರಗಳನ್ನು ಆರ್‌ಬಿಐ ಸತತ ಮೂರನೇ ಬಾರಿ ಹೆಚ್ಚಿಸಿದ್ದು, ಪ್ರಸ್ತುತ ರೆಪೊ ದರಗಳು ಶೇ 5.40ರಷ್ಟು ಇರುತ್ತವೆ. ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಇಂದು ಮುಂಬೈನಲ್ಲಿ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಘೋಷಿಸಿದರು. ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ರೆಪೋ ದರ ಶೇ.1.40ರಷ್ಟು ಏರಿಕೆಯಾಗಿದೆ. ಇದರ ಪರಿಣಾಮ ಗೃಹ, ವಾಹನ ಹಾಗೂ ಇತರ ಸಾಲಗಳ ಮೇಲಿನ ಇಎಂಐ ಮತ್ತಷ್ಟು ದುಬಾರಿಯಾಗಲಿದೆ.

ಮೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇಕಡಾ 0.40 ರಷ್ಟು ಹೆಚ್ಚಿಸಿತ್ತು. ನಂತರ ಜೂನ್ ತಿಂಗಳಲ್ಲಿ ರೆಪೋ ದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಲಾಯಿತು. ಈಗ ರೆಪೊ ದರ ಶೇ.5.40ಕ್ಕೆ ಏರಿಕೆಯಾಗಿದೆ.