ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಎಚ್.ಎನ್.ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಕೆರೆಮಕ್ಕಿ ಮಹೇಶ್ ಆಯ್ಕೆ…

65
firstsuddi

ಚಿಕ್ಕಮಗಳೂರು: ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಎಚ್.ಎನ್.ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಕೆರೆಮಕ್ಕಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಚ್.ಬಿ. ಮಹೇಂದ್ರ, ನಿರ್ದೇಶಕರುಗಳಾಗಿ ಬಿ.ಎಂ.ರವಿ, ಬಿ.ಸಿ. ಪ್ರಕಾಶ್, ಹೆಚ್.ಎಂ. ಶ್ಯಾಮ್, ಎ.ಕೆ.ವಸಂತೇಗೌಡ, ಎ.ಜಿ.ಗಿರೀಶ್, ಎ.ಎಂ. ಸತೀಶ್, ಎನ್.ಡಿ. ಮಂಜುನಾಥ್, ಎಂ.ಕೆ.ಧರ್ಮೇಶ್, ಎಂ.ಎ.ದೇವೇಗೌಡ, ಎನ್.ಎಸ್.ಪ್ರಸನ್ನ, ಬಿ.ಬಿ.ನಿವೇದಿತ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಬೆಳೆಗಾರರ ಒಕ್ಕೂಟದ ನಾಮ ನಿರ್ದೇಶಿತ ನಿರ್ದೇಶಕರಾಗಿ ಕೆ.ಎಂ. ಶಾಂತೇಗೌಡ, ಎ.ಯು. ನಾರಾಯಣಗೌಡ ಆಯ್ಕೆಯಾಗಿದ್ದು, ಆವತಿಯಲ್ಲಿ ನಿನ್ನೆ ನಡೆದ ಸಂಘದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.