ಆಸ್ಪತ್ರೆಯ ಮೆಟ್ಟಿಲ ಬಳಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ…

49
firstsuddi

ಭೋಪಾಲ್: ಆಸ್ಪತ್ರೆಯ ಮೆಟ್ಟಿಲ ಬಳಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಕಣ್ಣೆದುರೇ ಘಟನೆ ನಡೆದರೂ ವೈದ್ಯರು ಮತ್ತು ದಾದಿಯರು ಸಹಾಯಕ್ಕೆ ಬರದೇ ನಿರ್ಲಕ್ಷ್ಯ ತೋರಿದ ಘಟನೆ ನಿನ್ನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

ಅರುಣ್ ಪರಿಹಾರ್ ಎಂಬ ವ್ಯಕ್ತಿ, ತನ್ನ ಪತ್ನಿ ವಾಲಾಬಾಯಿಗೆ ಬೆಳಗ್ಗೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ನಾನು ಜನನಿ ಎಕ್ಸ್‌ಪ್ರೆಸ್‌ಗೆ ಡಯಲ್ ಮಾಡಿದೆ ಆದರೆ ಅದು ತಡವಾಗಿ ತಲುಪಿತು. ಆಸ್ಪತ್ರೆಯಲ್ಲಿಯೂ ಸಹ, ಸ್ಟ್ರೆಚರ್ ಅಥವಾ ವಾರ್ಡ್ ಬಾಯ್ ಪತ್ತೆಯಾಗಲಿಲ್ಲ. ನಂತರ ಆಸ್ಪತ್ರೆಯ ಮೆಟ್ಟಿಲು ಮೇಲೆಯೇ ನನ್ನ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಪರಿಹಾರ್ ಮಾಹಿತಿ ನೀಡಿದ್ದಾರೆ.

ಅಲ್ಲೇ ವೈದ್ಯರು ಹಾಗೂ ನರ್ಸ್‌ಗಳು ಓಡಾಡುತ್ತಿದ್ದರು ಸಹಾಯಕ್ಕೆ ಬಂದಿಲ್ಲ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲಿ ಜನ ಸೇರಲು ಪ್ರಾರಂಭಿಸಿದಾಗ ಸಿಬ್ಬಂದಿಯು ಆಸ್ಪತ್ರೆಯ ಸ್ಟ್ರೆಚರ್​ನಲ್ಲಿ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಯೊಳಗೆ ಕರೆದೊಯ್ದಿದ್ದಾರೆ. ನವಜಾತ ಶಿಶು ಮತ್ತು ಪತ್ನಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.