ಇಸ್ಲಮಾಬಾದ್ : ವಿಶ್ವದಾಧ್ಯಂತ ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಆಟಗಾರರನ್ನು ಬೆಂಬಿಡದೆ ಕಾಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸಿದ ಪಾಕಿಸ್ತಾನದ 29 ಮಂದಿ ಆಟಗಾರರಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಪಾಕ್ ಆಟಗಾರರು ಜೂನ್.28 ರಂದು ಮ್ಯಾಂಚೆಸ್ಟರ್‍ಗೆ ಪ್ರಯಾಣ ಬೆಳೆಸಲಿದ್ದು, ಹೀಗಾಗಿ ಪ್ರಯಾಣ ಬೆಳೆಸುವುದಕ್ಕೂ ಮೊದಲು ಎರಡು ಹಂತದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿತ್ತು. ಅದರಂತೆ ಮೊದಲ ಹಂತದ ತಪಾಸಣೆ ನಡೆಸಿದಾಗ ಮೂವರು ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಈಗಾ ಎರಡನೇ ಹಂತದ ತಪಾಸಣೆ ಕೂಡಾ ಮುಕ್ತಾಯವಾಗಿದ್ದು, ಇದರಲ್ಲಿ 7 ಮಂದಿ ಆಟಗಾರರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಈ ಮೂಲಕ 10 ಮಂದಿ ಆಟಗಾರರಿಗೆ ಸೋಂಕು ತಗುಲಿದಂತಾಗಿದೆ.
ಫಖರ್ ಜಮಾನ್, ಶದಾಬ್ ಖಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್, ವಹಾಬ್ ರಿಯಾಜ್ ಕೊರೊನಾ ಸೋಂಕಿಗೆ ತುತ್ತಾಗಿರುವ ಆಟಗಾರರಾಗಿದ್ದಾರೆ.










