ಇಂದು ಪಶ್ಚಿಮಬಂಗಾಳ ಹಾಗೂ ಅಸ್ಸೋಂನಲ್ಲಿ ಮೊದಲ ಹಂತದ ಚುನಾವಣೆ ಮತದಾನ…

125
firstsuddi

ಕೋಲ್ಕತ್ತಾ : ಇಂದು ಐದು ರಾಜ್ಯಗಳ ಪೈಕಿ ಪಶ್ಚಿಮಬಂಗಾಳ ಹಾಗೂ ಅಸ್ಸೋಂನಲ್ಲಿ ಮೊದಲ ಹಂತದ ಚುನಾವಣೆ ಮತದಾನ ನಡೆಯಲಿದ್ದು, ಬಂಗಾಳದ 30 ಕ್ಷೇತ್ರ ಹಾಗೂ ಅಸ್ಸೋಂನ 47 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ಆರಂಭಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಬಂಗಾಳದ 30 ಕ್ಷೇತ್ರಗಳ 91 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ಬರೆಯಲಿದ್ದಾರೆ. ಇನ್ನು ಅಸ್ಸೋಂನಲ್ಲಿ 47 ಕ್ಷೇತ್ರದಿಂದ 23 ಮಹಿಳೆಯರು ಸೇರಿ 264 ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.

ಎರಡು ರಾಜ್ಯಗಳಿಂದ ಸುಮಾರು 1.54 ಕೋಟಿ ಜನರು ಮತದಾನ ಮಾಡುತ್ತಿದ್ದು, ಬೆಳಗ್ಗೆ 8ರಿಂದಲೇ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.