ಇಂದು ಬಳ್ಳಾರಿಯ ಹಲಕುಂದಿ ಮಠದಿಂದ ಭಾರತ್ ಜೋಡೋ ಪಾದಯಾತ್ರೆ ಆರಂಭ…

71
firstsuddi

ಬಳ್ಳಾರಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ನಗರದ ಹಲಕುಂದಿ ಮಠದಿಂದ ಆರಂಭವಾಗಿದೆ. ನಿನ್ನೆ ಸಂಜೆ ರಾಹುಲ್ ಗಾಂಧಿ ಬಳ್ಳಾರಿ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಸಾವಿರಾರು ಕಾರ್ಯಕರ್ತರು ರಾಹುಲ್ ಗಾಂಧಿ ಅವರಿಗೆ ಜೈಕಾರ ಹಾಕಿದರು.

ಇಂದು ಬೆಳಗ್ಗೆ 6.30ಕ್ಕೆ ಬಳ್ಳಾರಿಯ ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ಬಳ್ಳಾರಿ ನ್ಯಾಯಾಲಯದ ಎದುರಿನ ಕಮ್ಮ ಭವನದಲ್ಲಿ ವಿರಾಮ ಇರಲಿದೆ. ನಂತರ ಸಂಜೆ 4 ಗಂಟೆಗೆ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.ಸಂಜೆ 7 ಗಂಟೆಗೆ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಕಾರ್ಯಕರ್ತರು ವಾಸ್ತವ್ಯ ಹೂಡಲಿದ್ದಾರೆ.

ಕಾಂಗ್ರೆಸ್ ಭಾರತ್ ಜೋಡೋ ಸಮಾವೇಶಕ್ಕೆ ಬಳ್ಳಾರಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ ಎಂಬ ಬಗ್ಗೆಯೂ ಹಲವು ಆಯಾಮಗಳ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲೇ ಸ್ಪರ್ಧೆ ನಡೆಸಿ ಗೆದ್ದ ಇತಿಹಾಸವೂ ಇದೆ. ಈ ಹಿಂದೆ ಕಾಂಗ್ರೆಸ್ ಪಾಲಿಗೆ ಭದ್ರ ಕೋಟೆಯಂತಿದ್ದ ಬಳ್ಳಾರಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ಈ ಕಾರಣದಿಂದಲೂ ಮಹತ್ವ ಪಡೆದುಕೊಂಡಿದೆ.