ನವದೆಹಲಿ: ಇಂದು 2022ನೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಆದ್ರೆ ಸೂರ್ಯಗ್ರಹಣ ಸಂಭವಿಸುವ ಸಮಯ ಭಾರತದಲ್ಲಿ ರಾತ್ರಿಯಿರುವ ಕಾರಣ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಈಗ ಸಂಭವಿಸಲಿರುವ ಸೂರ್ಯಗ್ರಹಣ ಭಾಗಶಃ ಸೂರ್ಯ ಗ್ರಹಣವಾಗಿದೆ. ವಿಜ್ಞಾನಿಗಳ ಪ್ರಕಾರ ಕೌತುಕ, ಜ್ಯೋತಿಷಿಗಳ ಪ್ರಕಾರ ಭೂಮಿಗೆ ಕೆಡುಕಿನ ನಂಬಿಕೆ.
ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣವು, ಏಪ್ರಿಲ್ 30 ರಂದು ರಾತ್ರಿ 12:15ಕ್ಕೆ ಆರಂಭವಾಗಲಿದ್ದು, ಮೇ 1ರ ಬೆಳಗ್ಗೆ 4.07ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ.










