ಇಡೀ ವಿಶ್ವದಾಧ್ಯಂತ ಕೊರೊನಾ ವೈರಸ್‍ಗೆ 10,048 ಮಂದಿ ಬಲಿ…

123
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ವಿಶ್ವದಾಧ್ಯಂತ 10,048 ಮಂದಿ ಬಲಿಯಾಗಿದ್ದು, 1,47,144 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಒಟ್ಟು 179 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಈವರೆಗೆ 2,45,629 ಮಂದಿಗೆ ತಗುಲಿರುವುದಾಗಿ ದೃಢಪಟ್ಟಿದ್ದು, ಅವರಲ್ಲಿ 10,048 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದು, 88,437 ಮಂದಿ ಚಿಕಿತ್ಸೆಯನ್ನು ಪಡೆದು ಚೇತರಿಸಿಕೊಂಡಿದ್ದಾರೆ. ಅಲ್ಲದೇ ಭಾರತದಲ್ಲಿ ಕೊರೊನಾ ವೈರಸ್‍ಗೆ 194 ಮಂದಿ ತುತ್ತಾಗಿದ್ದು, 20 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.