ಟೋಕಿಯೋ : ಟೋಕಿಯೋ ಒಲಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾರತಿಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಇತಿಹಾಸ ರಚಿಸಿದೆ.
ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಭಾರತ ಮಣಿಸಿದ್ದು, ಆಗಸ್ಟ್ 4ರಂದು ಅರ್ಜೆಂಟಿನಾ ವಿರುದ್ಧ ಭಾರತ ಸೆಮಿಫೈನಲ್ ಆಡಲಿದೆ.
ನಿನ್ನೆ ಪುರುಷರ ಹಾಕಿ ಟೀಂ 41 ವರ್ಷದ ಬಳಿಕ ಒಲಿಂಪಿಕ್ ನಲ್ಲಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದು, ಆಗಸ್ಟ್ 3 ರಂದು ನಡೆಯಲಿರುವ ಸೆಮಿಫೈನನಲ್ಲಿ ಭಾರತ ಪ್ರಬಲ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.










